

ಹೊಸನಗರ: ಇತಿಹಾಸ ಪ್ರಸಿದ್ಧ ಶ್ರೀ ಜೇನುಕಲ್ಲಮ್ಮ ದೇವಸ್ಥಾನ ಅಮ್ಮನಘಟ್ಟ ಇದರ ನೂತನ ಶಿಲಾಮಯ ದೇವಸ್ಥಾನ ಲೋಕಾಪಣೆ ಕಾರ್ಯಕ್ರಮ ಜೂನ್ 04-06-2825 ನೇ ಬುಧವಾರ ಬೆಳ್ಳಿಗೆ 10 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಶ್ರೀ ಜೇನುಕಲಮ್ಮ ದೇವಸ್ಥಾನ ಅಮ್ಮನಘಟ್ಟ ದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ ಸ್ವಾಮಿ ರಾವ್ ತಿಳಿಸಿದ್ದಾರೆ.
ಈ ಕುರಿತಾಗಿ ಅಮ್ಮನಘಟ್ಟ ದೇವಸ್ಥಾನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜೂನ್ 1 ರಿಂದ 4ರವರೆಗೆ ಜಾರೈಳ ಶ್ರೀ ಪ್ರಸಾದ ತಂತ್ರಿ ಇವರ ನೇತೃತ್ವದಲ್ಲಿ ಬ್ರಹ್ಮಕಲಶ, ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು ನೂತನ ಶಿಲಾಮಯ ದೇವಸ್ಥಾನವನ್ನ
ಪರಮಪೂಜ್ಯ ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರು, ಮುರುಘಾಮಠ, ಆನಂಪುರ ಇವರು ನೆರವೇರಿಸಲಿದ್ದು ಮಹಾದ್ವಾರ ಉದ್ಘಾಟನೆಯನ್ನ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ, ಸುಕ್ಷೇತ್ರ ನರಸೀಪುರ (ಕಂಚಾರಘಟ್ಟಿ) ಹಾವೇರಿ ಜಿಲ್ಲೆ ಇವರು ಉದ್ಘಾಟಿಸಲಿದ್ದಾರೆ ಹಾಗೆಯೇ ಈ ಒಂದು ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ
ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ,
ಶ್ರೀ ನಾರಾಯಣಗುರು ಮಹಾಸಂಸ್ಥಾನ, ನಿಟ್ಟೂರು, ಅಮೃತ-ಗರ್ತಿಕೆರೆ ಹಾಗೂ ಶ್ರೀ ಮ. ನಿ. ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಶ್ರೀ ಸದಾನಂದ ಶಿವಯೋಗಾಶ್ರಮ, ಮೂಲೆಗದ್ದೆ ಮಠ, ಹೊಸನಗರ ಇವರ ದಿವ್ಯ ಸಾನಿಧ್ಯವಿರಲಿದೆ ಜೊತೆಗೆ ಸಂಸದರಾದ ಬಿ ವೈ ರಾಘವೇಂದ್ರ ಅವರು ದೇವಸ್ಥಾನದ ಸುಸಜ್ಜಿತ ಶಾಶ್ವತ 108 ಮೆಟ್ಟಿಲುಗಳ ಶಿಲನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಿದ್ದು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ, ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಇನ್ನೋರ್ವ ಶಾಸಕರಾದ ಆರಗ ಜ್ಞಾನೇಂದ್ರ, ಹಾಗೂ ಇನ್ನು ಮುಂತಾದ ಜಿಲ್ಲಾ ನಾಯಕರುಗಳು ಪಾಲ್ಗೊಳ್ಳಲಿದ್ದು ಈ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿಯನ್ನು ಮಾಡಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಕೆ ಎಲ್ ಸುಧೀರ್, ಸಂತೋಷ್, ಎಚ್ ಕೆ ಹರೀಶ್, ಪುಟ್ಟಪ್ಪ, ಶ್ರೀನಿವಾಸ್, ವಿಜೇಂದ್ರ ರಾವ್, ಕೊಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ದೇವಸ್ಥಾನ ಅರ್ಚಕರಾದ ಭಾಸ್ಕರ್ ಜೋಯಿಸ್ ಮುಂತಾದವರು ಪಾಲ್ಗೊಂಡಿದ್ದರು.
ಅಧಿಕಾರ ಬಿಟ್ಟು ಕೊಡುತ್ತೇನೆ..
ದೇವಸ್ಥಾನ ಲೋಕಾರ್ಪಣೆ ವಿಚಾರದಲ್ಲಿ ಅನೇಕ ಗೊಂದಲಗಳು ಉಂಟಾಗಿದ್ದವು ಅವೆಲ್ಲ ಈಗ ನಿವಾರಣೆಯಾಗಿದೆ. ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸುವುದು ನಮ್ಮ ಉದ್ದೇಶ ಅಷ್ಟೇ ಇಲ್ಲಿ ಯಾವುದೇ ರಾಜಕೀಯ ಮೇಲಾಟಕ್ಕೆ ಅವಕಾಶ ಇಲ್ಲ ನಮ್ಮ ಸಮಿತಿ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದ್ದು ಭಕ್ತರ ಅನುಕೂಲಕ್ಕೆ ತಕ್ಕಂತೆ ದೇವಸ್ಥಾನವನ್ನ ಅಭಿವೃದ್ಧಿ ಮಾಡಲಾಗಿದೆ. ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಮುಗಿದ ಬಳಿಕ ಸಮಿತಿ ಸಭೆ ಸೇರಿ ಅಲ್ಲಿ ನನ್ನ ಅಧ್ಯಕ್ಷ ಅಧಿಕಾರವನ್ನು ಬಿಟ್ಟುಕೊಡುತ್ತೇನೆ ಎಂದು ತಿಳಿಸಿದರು.
ಆಪಾದನೆ ಸ್ವೀಕಾರ..
ನನ್ನ ಮೇಲೆ ಅನೇಕ ಆಪಾದನೆಗಳು ಬಂದಿವೆ ಆದರೆ ಆಪಾದನೆಗಳು ನನಗೇನು ಹೊಸದಲ್ಲ ಅದನ್ನ ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಮಾರ್ಮಿಕವಾಗಿ ನೋಡಿದರು..
JENUKALLAMMA..
Discover more from Prasarana news
Subscribe to get the latest posts sent to your email.