

ಹೊಸನಗರ: ರೂ 2 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಆಗಿರುವ ತಾಲೂಕಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ನೂತನ ಶಿಲಾಮಯ ದೇವಾಲಯ ಇದೇ 2025ರ ಜೂನ್ 4ರ ಬುಧವಾರ ಲೋಕಾರ್ಪಣೆಗೊಳ್ಳುವ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠಾಧ್ಯಕ್ಷ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಜಿ ಅವರನ್ನು ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ಆತ್ಮೀಯವಾಗಿ ಆಮಂತ್ರಿಸಿದರು.
ಈ ವೇಳೆ ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಉಮೇಶ್ ಕೆಂಚನಾಲ, ಉಮೇಶ್ ಸೊಪ್ಪಿನಮಲ್ಲಿ, ಸಮಿತಿ ಕಾರ್ಯದರ್ಶಿ ಕೋಡೂರು ಸುಧೀರ್, ಸದಸ್ಯ ಯಳಗಲ್ಲು ಪುಟ್ಟಪ್ಪ ಉಪಸ್ಥಿತರಿದ್ದರು.
INVITATION: JENUKALLAMMA.
Discover more from Prasarana news
Subscribe to get the latest posts sent to your email.