

ಹೊಸನಗರ: ಪೌರ ಸೇವಾ ನೌಕರರ ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ಪಟ್ಟಣ ಪಂಚಾಯತ್ ಪೌರ ನೌಕರರು ಶುಕ್ರವಾರ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಹಲವಾರು ಬೇಡಿಕೆಗಳು ಸುಮಾರು ದಶಕಗಳಿಂದ ಬಾಕಿ ಉಳಿದಿದ್ದು ಸದರಿ ಬೇಡಿಕೆಗಳನ್ನ ಇದುವರೆಗೂ ಈಡೇರಿಸಿ ಇರುವುದಿಲ್ಲ ಈ ಕುರಿತಂತೆ ಸರ್ಕಾರಕ್ಕೆ ಹಲವು ಬಾರಿ ಮನವಿಯನ್ನ. ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ ಈ ನಿಟ್ಟಿನಲ್ಲಿ ದಿನಾಂಕ 12-04-2025 ರಂದು ಬೆಳಗಾವಿ ಜಿಲ್ಲೆಯ ರಾಯಭಾಗದ ಪಟ್ಟಣದಲ್ಲಿ ನಡೆದ ಸಂಘದ ರಾಜ್ಯ ಪರಿಷತ್ ಸಭೆಯಲ್ಲಿ ಪೌರಸೇವಾ ನೌಕರರ ಬೇಡಿಕೆಗಳ ಬಗ್ಗೆ ಒಂದು ತಿಂಗಳ ಮುಷ್ಕರ ನೋಟೀಸ್ ನ್ನು ಸರ್ಕಾರಕ್ಕೆ ಸಲ್ಲಿಸಲು ಸದರಿ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಳ್ಳಲು ನಿರ್ಣಯಿಸಲಾಗಿರುತ್ತದೆ. ಈಗಾಗಲೇ ಮುಷ್ಕರ ನೋಟೀಸ್ ನ್ನು ಸಹಾ ನೀಡಿದ್ದು ಒಂದು ತಿಂಗಳ ಅವಧಿಯು ಮುಗಿದಿರುತ್ತದೆ. ಆದರೆ ಇದುವರೆಗೂ ಸಂಘದ ಪದಾಧಿಕಾರಿಗಳ ಸಭೆ ಕರೆಯದೇ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ದಿನಾಂಕ 30-05-2025 ರಿಂದ ರಾಜ್ಯಾದ್ಯಂತ ಸ್ವಚ್ಛತೆ ಸ್ಥಗಿತಗೊಳಿಸಿ ಅನಿರ್ಧಿಷ್ಠವಧಿ ಮುಷ್ಕರ ಪ್ರಾರಂಭಿಸುವುದು ಮತ್ತು ದಿನಾಂಕ 02-06-2025 ರಿಂದ ನೀರು ಸರಬರಾಜು ಸಹಾ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲು ಮುಂದಿನ ರಾಜ್ಯ ಸಂಘದಿಂದ ಸಂದೇಶ ಬರುವವರೆಗೂ ಮುಷ್ಕರವನ್ನು ನಡೆಸಲು ಸೂಚಿಸಿದ್ದು, ಅದರಂತೆ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಷ್ಕರ ನಡೆಸಲು ಸಂಪೂರ್ಣ ಸಹಕಾರ ನೀಡಬೇಕೆಂದು ತಾಲೂಕು ದಂಡಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಹೊಸನಗರ ಘಟಕ ಮನವಿಯನ್ನ ಸಲ್ಲಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ,
ಪ್ರತಿಭಟನೆಯಲ್ಲಿ ಶಾಖಾ ಸಂಘದ ಅಧ್ಯಕ್ಷರಾದ ನಾಗಪ್ಪ ಉಪಾಧ್ಯಕ್ಷರಾದ ನಾಗರಾಜ್ ಹಾಗೂ ಪಟ್ಟಣ ಪಂಚಾಯಿತಿ ಪೌರ ಸೇವಾ ನೌಕರರುಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
INDEFINITE PERIOD..
Discover more from Prasarana news
Subscribe to get the latest posts sent to your email.