

ಹೊಸನಗರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಜನಜೀವನ ಅಸ್ತವ್ಯಸ್ತವಾಗಿದೆ ವಿದ್ಯುತ್ ಸಂಪರ್ಕ,ಮನೆಗಳಿಗೆ ಹಾನಿ, ಮೊಬೈಲ್ ನೆಟ್ವರ್ಕ್, ವಾಹನ ಸಂಚಾರ, ವ್ಯವಹಾರ ದಲ್ಲಿ ವ್ಯಥೆಯ ಸೇರಿ ಬಹಳಷ್ಟು ಸಮಸ್ಸೆ ಉಂಟಾಗಿದೆ.
ತಾಲೂಕಿಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ 118 ವಿದ್ಯುತ್ ಕಂಬಗಳು ನೆಲಕುರಳಿದೆ ಒಂದು ಪರಿವರ್ತಕಕ್ಕೆ ಹಾನಿಯಾಗಿದೆ ಮುಖ್ಯ ಹೆದ್ದಾರಿಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಮರಗಳು ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಹದಗೆಟ್ಟಿದೆ. ವಿದ್ಯುತ್ ಸಮಸ್ಯೆಯಿಂದಾಗಿ ಮೊಬೈಲ್ ಗಳು ಆಫ್ ಆಗಿದ್ದು ಹೋಟೆಲ್ ಹಾಗೂ ಇನ್ನಿತರೆ ಉದ್ಯಮಿಗಳಿಗೆ ಬಹಳಷ್ಟು ತೊಂದರೆ ಆಗಿದೆ. ಜೊತೆಗೆ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಒಂದಿಷ್ಟು ಮನೆಗಳಿಗೆ ಹಾನಿಯಾಗಿದ್ದು ಕೆಲವು ಭಾಗಗಳಲ್ಲಿ ಮರಗಳು ಬೀಳುವ ಹಂತದಲ್ಲಿದೆ. ನದಿ ಹಳ್ಳಕೊಳ್ಳಲು ತುಂಬಿ ಹರಿಯುತ್ತಿದ್ದು ಗ್ರಾಮೀಣ ಭಾಗದ ಜನರು ಹಳ್ಳ ಕುಳ್ಳ, ಕಾಲು ಸಂಕವನ್ನ ದಾಟುವಾಗ ಎಚ್ಚರಿಕೆಯನ್ನು ವಹಿಸಬೇಕು. ಅಲ್ಲದೆ ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳನ್ನು ನದಿ ಹಳ್ಳ ಕೊಳ್ಳಗಳ ಬಳಿ ತೆರಳದಂತೆ ಜಾಗೃತಿ ವಹಿಸಬೇಕು. ಹಾಗೆಯೇ ತುರ್ತು ಪರಿಸ್ಥಿತಿ ಅಂತ ಸಂದರ್ಭದಲ್ಲಿ ತಾಲೂಕು ಆಡಳಿತ ತಿಳಿಸಿರುವ ದೂರವಾಣಿ ಸಂಖ್ಯೆಗೆ ಮಾಹಿತಿಯನ್ನು ನೀಡಬೇಕು. ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಸೂರಿಯುತ್ತಿರುವ ಭಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ..
HOSANAGARA NEWS...
Discover more from Prasarana news
Subscribe to get the latest posts sent to your email.