

ಹೊಸನಗರ: ತಾಲೂಕಿನ ಎಂ. ಗುಡ್ಡಕೊಪ್ಪ ಗ್ರಾಮ ತಾಲೂಕು ಪಂಚಾಯತಿಗೆ ನಿಯೋಜನೆಗೊಂಡಿದ್ದ ಎಸ್. ರವಿ ಅವರನ್ನು ಸರ್ಕಾರಿ ಸೇವೆಯಲ್ಲಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಿಇಓ ಮತ್ತು ತಿಸ್ತು ಪ್ರಾಧಿಕಾರದ ಅಧಿಕಾರಿ ಎನ್. ಹೇಮಂತ್ ಅವರು ಇಲಾಖೆ ವಿಚಾರಣೆ ಕಾಯ್ದಿರಿಸಿ, ಪಿಡಿಒ ಎಸ್. ರವಿ ಅವರನ್ನು ತತಕ್ಷಣ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ 21 ಜಲೈ 2025ರಂದು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಎಂ. ಗುಡೇಕೊಪ್ಪ ಗ್ರಾಮ ಪಂಚಾಯತಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಪಂಚಾಯತಿ ವ್ಯಾಪ್ತಿಯ ಇ-ಸ್ವತ್ತಿಗೆ ಸಂಬಂಧಿಸಿದಂತೆ, ಇ-ಸ್ವತ್ತಿನ ದಾಖಲೆಗಳನ್ನು ನಿರ್ವಹಿಸಲು ಇಲಾಖಾ ನಿಯಮಾನುಸಾರ ಪ್ರತ್ಯೇಕ ರಿಜಿಸ್ಟರನ್ನು ನಿರ್ವಹಿಸಿರುವುದಿಲ್ಲ.ಅಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ನೋಂದಣಿಯಾಗಿದ್ದ65 ಇ-ಸ್ವತ್ತುಗಳು ಪಿಡಿಒ ಲಾಗಿನ್ನಲ್ಲಿ ಬಂದಿದ್ದು, ಇವುಗಳನ್ನು ಯಾವುದೇ ಕಾರಣವಿಲ್ಲದೆ ಪಿಡಿಒ ತಿರಸ್ಕರಿಸಿದ್ದಾರೆ. ತಿರಸ್ಕೃತ ಇ-ಸ್ತೋತ್ತುಗಳು ಮತ್ತೆ ನೀಡಲು ಸಬ್ ರಿಜಿಸ್ಟ್ರಾರ್ ಅವರಿಗೆ ಅವಕಾಶ ಇರುವುದಿಲ್ಲ. ಇದು ಪುನಹ ರಾಜ್ಯ ಸರ್ಕಾರಕ್ಕೆ ಪತ್ರ ಮುಖೇನ: ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಮತ್ತೊಮ್ಮೆ ಇ-ಸ್ವತ್ತಿಗೆ ತಂತ್ರಾಂಶ ಮುಖಾಂತರ ಕಳುಹಿಸ ಬೇಕಾಗಿದ್ದು, ಇದು ಸಾರ್ವಜನಕರಿಗೆ ವಿನ ಕಾರಣ ನೀಡಿದ ತೊಂದರೆ ಆಗಿದೆ.ಪಂಚಾಯತಿ ವ್ಯಾಪ್ತಿಯ ಲೇಔಟ್ ಅಸ್ತಿಗಳು ಹಾಗೂ ಇತರೆ ಆಸ್ತಿಗೆ ಸಂಬಂಧಿಸಿದಂತೆ ಒಟ್ಟು 414 ಸ್ವತ್ತುಗಳಿಗೆ ಪಂಚತಂತ್ರಾಂಶದಲ್ಲಿ ತೆರಿಗೆ ಮಾಹಿತಿ ಇಂಡೀಕರಿಸಿದನಂತರ ತೆರಿಗೆಯ ಮಾಹಿತಿಯನ್ನು ತಿದ್ದುಪಡಿ ಮಾಡಿ ಶೂನ್ಯ ಎಂದು ನಮೂದು ಮಾಡಿದ್ದು, ಇದರಿಂದ ತಂತ್ರಾಂಶದಲ್ಲಿ ಶೂನ್ಯ ಬೇಡಿಕೆ ಸೃಜನೆಯಾಗಿದೆ. ಇದರಿಂದ ಪಂಚಾಯತಿ ವ್ಯಾಪ್ತಿಯ ಒಟ್ಟು 414 ಸ್ವತ್ತುಗಳಿಗೆ ಯಾವುದೇ ಕಂದಾಯ ನಿಗದಿ ಪಡಿಸಲಾಗದೆ, ಪಂಚಾಯತಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಅಲ್ಲದೆ, ಪಿಡಿಒ ಎಸ್. ರವಿ ಕೇಂದ್ರ ಸ್ಥಾನದಲ್ಲಿ ವಾಸವಿರದೆ, ಕಚೇರಿಯ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಸಾರ್ವಜನಕರಿಗೆ ತೊಂದರೆ ನೀಡಿದ್ದು, ಶವ ಸಂಸ್ಕಾರದಲ್ಲಿ ಸಾಮಾನ್ಯ ವರ್ಗದವರಿಗೂ ಸಾವಿರಾರು ರೂಪಾಯಿ ಅನುದಾನ ನೀಡಿದ್ದಾರೆ. ನಿರ್ದಿಷ್ಟ ಯೋಜನೆಗಳಿಗೆ ಸಹಾಯಧನ ನೀಡುವ ವೇಳೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವುದಿಲ್ಲ. 15ನೇ ಹಣಕಾಸು ಯೋಜನೆಯಡಿ 3ಲಕ್ಷ 39 ಸಾವಿರ 342 ರೂಪಾಯಿಗಳನ್ನು ಮೆಸ್ಕಾಂ ವಿದ್ಯುತ್ ಸಂಪರ್ಕ ಪಡೆಯಲು ವ್ಯಯಿಸಿದ್ದು, ಸದರಿ ಕಾಮಗಾರಿಗಳೇ ನಡೆಯದೆ, ಹಣ ವ್ಯಯವಾಗಿದ್ದು, ಜಿಲ್ಲುಗಳಲ್ಲಿ ಸಹ ಭಾರೀ ವೃತ್ತಾಸ ಕಂಡುಬಂದಿದೆ. ಈ ಬಗ್ಗೆ ಯಾವುದೇ ಸಭೆಯಲ್ಲೂ ಅನುಮೋದನೆ ಪಡೆದಿಲ್ಲ.ಈ ಕುರಿತು ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು ಹಲವು ಲಿಖಿತ ದೂರು ನೀಡಿದ್ದು, ಎಸಗಿದ್ದ ಕರ್ತವ್ಯಲೋಪವನ್ನು ಕುರಿತು ಕಾರಣಕೇಳಿ ಪಿಡಿಒ ಎಸ್. ರವಿ ಅವರಿಗೆ ಇಲಾಖೆ ನೋಟೀಸ್ ನೀಡಿದ್ದರೂ, ಸಮಜಾಯಿಷಿ ಉತ್ತರ ನೀಡಲು ನೀಡಿದ್ದ ಕಾಲಾವಕಾಶ ಕೊನೆ ಗೊಂಡ ಹಿನ್ನಲೆಯಲ್ಲಿ ಈ ಮೇಲಿನ ಎಲ್ಲಾ ಆರೋಪಗಳನ್ನು ಪರಿಶೀಲನೆ ಮಾಡಿ ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿಗಳು ನೀಡಿದ್ದ ವರದಿ ಹಿನ್ನಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿಡಿಒ ಎಸ್.ರವಿ ಅವರನ್ನು ತತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
HOSANAGARA NEWS..
Discover more from Prasarana news
Subscribe to get the latest posts sent to your email.