

ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರಾದ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿ ಕಾಮಗಾರಿಯಲ್ಲಿ ಶೀಘ್ರ ಹಾಗೂ ಗುಣಮಟ್ಟ ಕಾಯ್ದು ಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಕೊಡಚಾದ್ರಿ ಸರ್ಕಾರಿ ಕಾಲೇಜಿನಿಂದ ಮಾವಿನಕೊಪ್ಪ ರಸ್ತೆವರೆಗಿನ ಹೈ ಮಾಸ್ಕ್ ಲೈಟ್ ಅಳವಡಿಕೆ ಕಾಮಗಾರಿ ಹಾಗೂ ಕಾಲೇಜ್ ಮುಂಭಾಗದ ಪ್ರಯಾಣಿಕರ ತಂಗುದಾಣ, ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ ಹಾಗೂ ತಾಲೂಕ ಸರ್ಕಾರಿ ಆಸ್ಪತ್ರೆಯ ಹೆಚ್ಚುವರಿ ಲ್ಯಾಬ್ ಕಟ್ಟಡದ ಕಾಮಗಾರಿಗಳನ್ನು ವೀಕ್ಷಿಸಿದರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳು ಶೀಘ್ರಗತಿಯಲ್ಲಿ ಯಲ್ಲಿ ನಡೆಯುತ್ತಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಹಲವು ಕಾಮಗಾರಿಗಳನ್ನು ನೀಡಿದ್ದು ಅವುಗಳನ್ನು ಶೀಘ್ರ ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವುದು ಎಂದರು. ಹಾಗೆಯೇ ಕಾಲೇಜುಗಳಲ್ಲಿ ಶೌಚಾಲಯ ಸರ್ಕಾರಿ ಆಸ್ಪತ್ರೆಗಳಿಗೆ ಸಿಬ್ಬಂದಿಗಳ ನಿಯೋಜನೆಗೆ ಅಲ್ಲಿನ ಅಧಿಕಾರಿಗಳು ಮನವಿಯನ್ನ ಮಾಡಿದ್ದು ಅದನ್ನು ಶೀಘ್ರ ಒದಗಿಸುವ ಕೆಲಸವನ್ನು ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ, ಚಿದಂಬರ್, ಮಾಸ್ತಿ ಕಟ್ಟೆ ಸುಬ್ರಮಣ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಜಿ.ಎನ್, ಗ್ರಾಮ ಪಂಚಾಯತ್ ಸದಸ್ಯ ಮಹೇಂದ್ರ, ಸದಾಶಿವ, ಗೋಪಿನಾಥ್, ಗುರುರಾಜ್, ನಾಸಿರ್, ಮಂಜು, ಉಪಸ್ಥಿತರಿದ್ದರು.
HOSANAGARA NEWS
Discover more from Prasarana news
Subscribe to get the latest posts sent to your email.