

ಹೊಸನಗರ:ರಾಜ್ಯದಲ್ಲಿ ಪ್ರಸಕ್ತ 2025-26ನೇ ಸಾಲಿನ ಮುಂಗಾರು
ಹಂಗಾಮಿನ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮಾ ಯೋಜನೆ ಜಾರಿಗೊಂಡಿದ್ದು, ವಿಮಾ ಕಂತು ಪಾವತಿಸಲು ಜು. 31 ಕೊನೆಯ ದಿನವಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ ವಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಈ ಕುರಿತಾಗಿ ಹೊಸನಗರ ಕೃಷಿ ಇಲಾಖೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲೂಕಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪ್ರಸ್ತುತ ಮುಂಗಾರು ಹಂಗಾಮಿಗೆ ಹಸಿಮೆಣಸಿನಕಾಯಿ, ಅಡಕೆ, ಶುಂಠಿ ಮತ್ತು ಮಾವು ಬೆಳೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ರೈತರು ಪ್ರತಿ ಹೆಕ್ಟೇರ್‌ಗೆ ಅಡಕೆಗೆ (6400 ರೂ.),, ಶುಂಠಿ (6500 ರೂ.), ಮಾವು (8000 ರೂ.) ಕಂತು ಪಾವತಿಸಬೇಕಿದೆ. ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಸಾಲ ಪ್ರಮಾಣದ ಮೇಲೆ ನಿರ್ಧರಿಸಲಾಗುತ್ತದೆ. ತಾಲೂಕಿನ ಎಲ್ಲ ರೈತರು ಬೆಳೆ ವಿಮಾ ಯೋಜನೆಯ ಲಾಭ ಪಡೆಯಬೇಕು. ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮಾ ಅರ್ಜಿಯೊಂದಿಗೆ ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್‌ಬುಕ್, ಕಂದಾಯ ರಸೀದಿ, ಆಧಾರ ಸಂಖ್ಯೆಯ ಜೆರಾಕ್ಸ್ ಪ್ರತಿ ಸಲ್ಲಿಸಬೇಕು.
ಯೋಜನೆಯಲ್ಲಿ ಪಾಲ್ಗೊಳ್ಳುವ ರೈತರು ಬ್ಯಾಂಕ್‌ಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳು, ಸ್ಥಳೀಯ ಪ್ರಾಂತೀಯ ಗ್ರಾಮೀಣ ಬ್ಯಾಂಕ್ ಗಳಲ್ಲಿ ಹಣ ಪಾವತಿಸಿ ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿಮಾ ಕಂತು ಪಾವತಿಸಿದ ರೈತರು ಕಾಲ ಕಾಲಕ್ಕೆ ಬೆಳೆ ಸಮೀಕ್ಷೆಯನ್ನು ಖುದ್ದಾಗಿ ಅಥವಾ ಗ್ರಾಮ ಆಡಳಿತಾಧಿಕಾರಿ ಅಧೀನ ಪಿ.ಆರ್. ಮೂಲಕ ನಿಗದಿತ ಅವಧಿಯೊಳಗಾಗಿ ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಹವಾಮಾನಾಧಾರಿತ ಬೆಳೆ ವಿಮೆಯ ಕೆಲ ನಿಯಮಗಳು ತಿದ್ದುಪಡಿಯಾಗಬೇಕು: ವಾಟಗೊಡ್ ಸುರೇಶ್.
ಬಳಿಕ ಮಾತನಾಡಿದ ಜಿಲ್ಲಾ ಕೃಷಿ ಸಮಾಜದ ಪ್ರಮುಖರಾದ ವಾಟಗೊಡ್ ಸುರೇಶ್ ಹವಾಮಾನಧಾರಿತ ಬೆಳೆ ವಿಮೆಯ ಕೆಲ ನಿಯಮಗಳಲ್ಲಿ ಬಹಳಷ್ಟು ಲೋಪಗಳಿದ್ದು ಅವುಗಳನ್ನ ಶೀಘ್ರವಾಗಿ ಸರ್ಕಾರ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪೋಡಿ, ಆರ್ ಟಿ ಸಿ, ಹಿಸ್ಸೆ ನಂಬರ್ ಗಳಲ್ಲಿ ವ್ಯತ್ಯಾಸ ವಾದಂತಹ ಕೃಷಿಕರಿಗೆ ಈ ವಿಮೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಅಂತಹ ಸಾವಿರಾರು ರೈತರು ಹೊಸನಗರ ತಾಲೂಕಿನಲ್ಲಿ ಇದ್ದಾರೆ ಅಂತವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವ ಮೂಲಕ ವಿಮೆಯನ್ನು ಪಾವತಿಸಲು ಅವಕಾಶವನ್ನ ಕಲ್ಪಿಸಿಕೊಡಬೇಕು ಹಾಗೆಯೇ ಶುಂಠಿ ಬೆಳೆಯನ್ನ ಮೇ ಮತ್ತು ಜೂನ್ ನಲ್ಲಿ ನಾಟಿ ಮಾಡಿ ಡಿಸೆಂಬರ್ ತಿಂಗಳಿನಲ್ಲಿ ಅದನ್ನ ಕೇಳುತ್ತಾರೆ ಆದರೆ ಅದನ್ನು ಈ ಬಾರಿ ಬೆಳೆದ ಶುಂಠಿಗೆ ವಿಮೆ ಸೇರುವುದಿಲ್ಲ ಮುಂದಿನ ಬಾರಿ ಅದು ದಾಖಲಾಗುತ್ತದೆ ಆದರೆ ಆ ಸಮಯದಲ್ಲಿ ರೈತ ಶುಂಠಿಯನ್ನು ಬೆಳೆದಿರುವುದಿಲ್ಲ ಹೀಗೆ ಹವಾಮಾನ ಆಧಾರಿತ ಬೆಳೆ ವಿಮೆ ಶುಂಠಿ ಬೆಳೆಗಾರರಿಗೆ ಸರಿಯಾಗಿ ಲಭಿಸುತ್ತಿಲ್ಲ ಇದನ್ನು ಸಹ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿದ್ದುಪಡಿಯಾಗಬೇಕೆಂದು ಅವರು ಈ ಮೂಲಕ ಸರ್ಕಾರವನ್ನು ಆಗ್ರಹಿಸಿದರು
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಚಿನ್ ಹೆಗಡೆ ಉಪಸ್ಥಿತರಿದ್ದರು..
HOSANAGARA NEWS...
Discover more from Prasarana news
Subscribe to get the latest posts sent to your email.