HOSANAGARA NEWS:    ಅಗತ್ಯ ವೈದ್ಯರ ನೇಮಕಕ್ಕಾಗಿ ಮುಂದುವರೆದ ಪ್ರತಿಭಟನೆ…
ಪ್ರತಿಭಟನಾ ಸ್ಥಳಕ್ಕೆ ಬಾರದ ಅಧಿಕಾರಿಗಳು…

ಹೊಸನಗರ: ರಾಜ್ಯದಲ್ಲೇ  ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಾಲೂಕಿನ ನಗರ ಹೋಬಳಿಯ ಮೂಡುಗೊಪ್ಪ ಗ್ರಾಮದ  ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಅಗತ್ಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ಸರಿಪಡಿಸುವಂತೆ ನಿನ್ನೆ ರಾತ್ರಿಯಿಂದಲೇ ಅಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಇಂದು ಸಹ ವೈದ್ಯರನ್ನು ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಆದರೆ ರಾತ್ರಿಯಿಂದ ಈವರೆಗೂ ಯಾವೊಬ್ಬ ಅಧಿಕಾರಿಗಳು ಪ್ರತಿಭಟನಾಕಾರರ  ಆವಾಲುಗಳನ್ನು ಸ್ವೀಕರಿಸಲು ಅಥವಾ ಪರಿಹಾರ ಸೂಚಿಸಲು ಬಾರದೆ ಇರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿಯಾಗಿದೆ.
ರಾಜ್ಯದಲ್ಲಿ ಮೂರ್ ನಾಲ್ಕು ಅಣೆಕಟ್ಟುಗಳ ನಿರ್ಮಾಣದಿಂದ ಈ ಭಾಗ ಈಗಾಗಲೇ ಮುಳುಗಡೆ ಪ್ರದೇಶವಾಗಿದೆ.  ಇತ್ತೀಚಿನ ವರ್ಷಗಳಲ್ಲಿ  ರಾಜ್ಯದಲ್ಲಿ ಹೆಚ್ಚು ಮಳೆ ದಾಖಲಾಗುವ ಪ್ರದೇಶವಾಗಿದ್ದು, ಮುಳುಗಡೆ ಸಂತ್ರಸ್ತರಿಗೆ ಈ ವರೆಗೂ ಸರ್ಕಾರದಿಂದ ಸೂಕ್ತ ಪರಿಹಾರ, ಪುನರ್ ವಸತಿ ದೊರೆತಿಲ್ಲ. ಮೂಲಭೂತ ಸೌಕರ್ಯ ಇಲ್ಲಿ ಮರೀಚಿಕೆಯಾಗಿದೆ. ಆದಾಗ್ಯೂ ಅಳಿದುಳಿದ  ಕೃಷಿಭೂಮಿಯಲ್ಲಿ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನರಿಗೆ ಯಾವುದೇ ಚುನಾಯಿತ ಸರ್ಕಾರಗಳು ಅಗತ್ಯ ಸೌಲಭ್ಯ ನೀಡುವಲ್ಲಿ ಕೈ ಚೆಲ್ಲಿವೆ. ಈ ಮಧ್ಯೆ ಇಲ್ಲಿನ ಸರ್ಕಾರಿ ಆಸ್ಪತ್ರೆ 24*7 ಕಾರ್ಯ ನಿರ್ವಹಿಸಬೇಕಿದ್ದರೂ ಅಗತ್ಯ ವೈದ್ಯರ ನೇಮಕವಿಲ್ಲದೆ ಜನರಿಗೆ ಭಾರೀ ತೊಂದರೆ ಉಂಟಾಗಿದೆ. ಇತ್ತೀಚಿಗೆ  ಸಂಜೆಯಾದರೆ ರಾತ್ರಿ ವೇಳೆಯ ಆಸ್ಪತ್ರೆ ಸಿಬ್ಬಂದಿಗಳಿಲ್ಲದೇ ಜನತೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಸಂಜೆ 4ರಿಂದ 9ರವರೆಗೆ ಆಸ್ಪತ್ರೆ ವೈದ್ಯರು, ಸೂಕ್ತ ಸಿಬ್ಬಂದಿ ಇಲ್ಲದೆ ಖಾಲಿ ಖಾಲಿ ಆಗಿರುತ್ತಿದ್ದು ತುರ್ತು ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲವಾಗಿದೆ. ಈ ಕುರಿತು ಹಲವು ಬಾರಿ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕ್ಷೇತ್ರದ ಶಾಸಕ ಈ ಬಗ್ಗೆ ಹಲವು ಬಾರೀ ರಾಜ್ಯ ಸರ್ಕಾರದ ಗಮನ ಸೆಳೆದರೂ ವೈದ್ಯರ ನೇಮಕಕ್ಕೆ ಮೀನಾಮೇಷ ಎಣಿಸಿ, ವೈದ್ಯರ ನೇಮಕಾತಿ ವಿಷಯದಲ್ಲಿ  ರಾಜಕೀಯಕ್ಕೆ ನಡೆಸುತ್ತಿದೆ ಎಂಬ ಗಂಭೀರ ಆರೋಪನ್ನ ಪ್ರತಿಭಟನಾಕಾರರು ಮಾಡಿದರು.
ನಿನ್ನೇ ರಾತ್ರಿ ಆಸ್ಪತ್ರೆಗೆ ಬಿಜೆಪಿ ಕಾರ್ಯಕರ್ತರು ದಿಢೀರ್ ಭೇಟಿ ನೀಡಿದಾಗ ಆಸ್ಪತ್ರೆಯಲ್ಲಿ ಯಾವುದೇ ಸಿಬ್ಬಂದಿಗಳು ಹಾಜರಿರದ ಕಾರಣ ತತಕ್ಷಣ ಗ್ರಾಮಸ್ಥರ ಸಹಯೋಗದಲ್ಲಿ ಬಿಜೆಪಿ ಅಹೋರಾತ್ರಿ ಆಸ್ಪತ್ರೆ ಎದುರು ಪ್ರತಿಭಟನೆ ಮುಂದಾಗಿಧು ಇಂದು ಸಹ ಪ್ರತಿಭಟನೆ ಮುಂದುವರೆದಿದೆ. ಈ ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಶಾಸಕರ ಆಪ್ತ ಕಾರ್ಯದರ್ಶಿ ರಾಜೇಶ್, ನರ್ತಿಗೆ ಸುರೇಶ್, ಬಂಕ್ರಿಬೀಡು ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರೆ.

HOSANAGARA NEWS..


Discover more from Prasarana news

Subscribe to get the latest posts sent to your email.

  • Related Posts

    SAGARA NEWS:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ, ಕಳಸವಳ್ಳಿ-ಅಂಬರಗೊಂಡ್ಲು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ: ಹರತಾಳು ಹಾಲಪ್ಪ..

    ಹೊಸನಗರ: ಕಳಸವಳ್ಳಿ-ಅಂಬರಗೊಂಡ್ಲು  ಸೇತುವೆ ಉದ್ಘಾಟನಾ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ನಾಡಿಗೆ ಬೆಳಕು ನೀಡಿ ಸರ್ವಸ್ವವನ್ನು ಕಳೆದುಕೊಂಡ ಈ ಭಾಗದ ಸಂತ್ರಸ್ತರ ಆರು ದಶಕಗಳ ಕನಸು ನನಸಾಗುವ ಸಂದರ್ಭ ಸಮೀಪಿಸುತ್ತಿದ್ದು ಜುಲೈ 14 ರ ದಿನ ಆ ದಿನಕ್ಕೆ ಸಾಕ್ಷಿಯಾಗಲಿದೆ ಎಂದು…

    Read more

    DECLARATION OF HOLIDAY: ಭಾರೀ ಮಳೆ; ತಾಲೂಕಿನ ಶಾಲಾ ಇಂದು ಸಹ ಕಾಲೇಜುಗಳಿಗೆ  ರಜೆ ಘೋಷಣೆ…

    ಹೊಸನಗರ ;ತಾಲ್ಲೂಕಿನಾದ್ಯಂತ ಭಾರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಜು 04-07-2025 ರ ಗುರುವಾರ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ತಹಸೀಲ್ದಾರ್ ರಶ್ಮಿ ಹಾಲೇಶ್ ಘೋಷಿಸಿದ್ದಾರೆ.ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಭಾರಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading