

ಹೊಸನಗರ:ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸಲು ಅಮೃತ 2.0 ಯೋಜನೆಯಡಿ ₹8 ಕೋಟಿ ಅನುದಾನ ಬಿಡುಗಡೆಯಾಗಿದೆ' ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು.
'ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು, ಮೂಲಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆ ಕಾಮಗಾರಿ ಆರಂಭಿಸಬೇಕು ಎಂಬುದು ನನ್ನ ಕನಸಾಗಿತ್ತು ಇದಕ್ಕೆ ನಾನು ನನ್ನ ಹಿಂದಿನ ಅಧಿಕಾರ ಅವಧಿಯಲ್ಲಿ ಸರ್ವೆಯನ್ನು ಮಾಡಿಸಿ ಅನುದಾನಕ್ಕೆ ಸರ್ಕಾರ ಮಟ್ಟದಲ್ಲಿ ಮನವಿಯನ್ನು ಮಾಡಿದ್ದೆ ಆದರೆ ನನ್ನ ಅವಧಿ ಅಧಿಕಾರ ಅವಧಿ ಮುಗಿದ ಬಳಿಕ ನಂತರ ಬಂದವರು ಆ ಬಗ್ಗೆ ಗಮನವನ್ನು ಹರಿಸಲಿಲ್ಲ ಆದರೆ ಈಗ ಆ ಯೋಜನೆಗೆ 8 ಕೋಟಿ ಹಣ ಬಿಡುಗಡೆಗೊಂಡಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು
ಅಲ್ಲದೇ ಹೊಸನಗರ ಬಸ್ ನಿಲ್ದಾಣ ಎರಡು ಕೋಟಿ ರೂ ಅನುದಾನದಲ್ಲಿ ವ್ಯವಸ್ಥಿತ ನವೀಕರಣ, ಜೀಮಿ ಚಾರ್ಜ್ ವಾಲಿಬಾಲ್ ಅಂಕಣದ ಶೌಚಾಲಯಕ್ಕೆ ಇರಿಸಲಾಗಿದ್ದ 15ಲಕ್ಷ ಅನುದಾನವನ್ನ ನೆಹರು ಕ್ರೀಡಾಂಗಣಕ್ಕೆ ನೀಡಿ ಆ ವಾಲಿಬಾಲ್ ಅಂಕಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷವನ್ನು ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆಗೊಳಿಸುವುದು ಹಾಗೆ ಪಟ್ಟಣದ ಹಾಳಾದಂತ ರಸ್ತೆ ಹಾಗೂ ಚರಂಡಿಗಳು ನಿರ್ಮಾಣವನ್ನು ಹಾಗೂ ಆಶ್ರಯ ಕಾಲೋನಿಗೆ ಚರಂಡಿ ಹಾಗೂ ರಸ್ತೆಗಳ ನಿರ್ಮಾಣ ಜೊತೆಗೆ ಮಳೆಗಾಲ ಮುಗಿದ ಬಳಿಕ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯನ್ನು ಸಹ ಆರಂಭಿಸಲಿದ್ದೇವೆ. ಹೀಗೆ ಹೊಸನಗರವನ್ನು ಹೊಸ ನಗರ ವಾಗಿಯೇ ಉಳಿಯಬೇಕು ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಅಭಿವೃದ್ಧಿ ಕಾರ್ಯವನ್ನು ಈ ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದೇನೆ ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ, ಉಪಾಧ್ಯಕ್ಷ ಚಂದ್ರಕಲಾ ನಾಗರಾಜ್,ರಂಗಸ್ವಾಮಿ ಯೋಜನಾ ನಿರ್ದೇಶಕರು ಜಿಲ್ಲಾ ನಗರ ಅಭಿವೃದ್ಧಿ ಕೋಶ ಶಿವಮೊಗ್ಗ,ಮಂಜುನಾಥ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಜಿಲ್ಲಾ ನಗರ ಅಭಿವೃದ್ಧಿ ಕೋಶ ಶಿವಮೊಗ್ಗ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂ ಎನ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಗುಲಾಬಿ ಮರಿಯಪ್ಪ, ಶಾಹಿನ, ಗುರುರಾಜ್, ನೇತ್ರಾವತಿ, ನಿತ್ಯಾನಂದ, ಗುರುರಾಜ್ ಪಾಲ್ಗೊಂಡಿದ್ದರು.
HOSANAGARA NEWS..
Discover more from Prasarana news
Subscribe to get the latest posts sent to your email.