

.
ರಿಪ್ಪನ್‌ಪೇಟೆ: ಪಟ್ಟಣದ ವಿದ್ಯಾರ್ಥಿನಿ ಹರ್ಷಿತ.ಎ. ಗಣಿತ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಹರ್ಷೀತ.ಎ.ಸಲ್ಲಿಸಿದ ಗಣಿತ ಶಾಸ್ತ್ರದಲ್ಲಿನ `ಎ ಸ್ಟಡಿ ಆನ್ ಡಾಮಿನೇಷನ್. ಸ್ಟ್ರೈಕಾಮ್ ಹ್ಯಾಮಿಂಗ್ ಅಂಡ್ ಟೋಪಾಲಾಜಿಕಲ್ ಇಂಡಿಸಸ್’ ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಣಿಪಾಲ್ಆಕಾಡೆಮಿಆಫ್ ಹೈಯರ್ಎಜುಕೇಷನ್ ಪಿಹೆಚ್‌ಡಿ ಪದವಿ ನೀಡಿದೆ.
ಮಣಿಪಾಲ್ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ಪ್ರಾಧ್ಯಾಪಕಿ ಡಾ.ಸಬಿತಾರವರ ಮಾರ್ಗದರ್ಶನದಲ್ಲಿ ಸಂಶೋಧನೆಕೈಗೊAಡಿದ್ದರು.
ಪಟ್ಟಣದ ಸಾಗರ ರಸ್ತೆಯ ನಿವಾಸಿ ಮತ್ತು ಸಾಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣ್‌ಕುಮಾರ್ ಮತ್ತು ಸೌಮ್ಯಇವರ ಪುತ್ರಿಯಾಗಿದ್ದಾಳೆ.
ಇವಳ ಈ ಸಾಧನೆಗೆ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಶುಭ ಹಾರೈಸಿ ಅಭಿನಂದಿಸಿದ್ದಾರೆ.
HARSHITHA. PHD..
Discover more from Prasarana news
Subscribe to get the latest posts sent to your email.