

ಹೊಸನಗರ: ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಅವರ ಹುಟ್ಟುಹಬ್ಬವನ್ನು ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಮೂಲಕ ದಿನಾಂಕ 07-03-2024 ರಂದು ಆಚರಿಸಲಾಗುವುದು ಎಂದು ಹೊಸನಗರ ಬಿಜೆಪಿ ಮಂಡಲ ತಿಳಿಸಿದೆ.
ಈ ಕುರಿತಾಗಿ ಇಂದು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ತಾಲ್ಲೂಕು ಮಂಡಲ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಯನ್ನಾ ಉದ್ದೇಶಿಸಿ ಮಾತನಾಡಿದ ಮುಖಂಡರಾದ ಹಾಲಗದ್ದೆ ಉಮೇಶ್ ಮಾಜಿ ಸಚಿವರು ನಮ್ಮ ನಾಯಕರಾದ ಹರತಾಳು ಹಾಲಪ್ಪನವರ ಹುಟ್ಟು ಹಬ್ಬದ ದಿನದಂದು ಹೊಸನಗರ ತಾಲೂಕಿನ ಕಾರಣಗಿರಿ ಸಮೀಪದ ರಾಮಚಂದ್ರ ಪುರ ಮಠ ಹಾಗೂ ನಂದಗೋಕುಲ ಮತ್ತು ಇನ್ನಿತರೆ ಗೋಶಾಲೆಯ ಗೋವುಗಳಿಗೆ ಮೇವುಗಳನ್ನ ವಿತರಿಸುವುದು ಹಾಗೂ ಬಿಜೆಪಿ ಯುವ ಮೋರ್ಚ ಾ ವತಿಯಿಂದ ಕೆಲ ಪ್ರಯಾಣಿಕ ತಂಗುದಾಣ ಗಳಿಗೆ ಬಣ್ಣವನ್ನು ಹೊಡೆಯುವುದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೆಯೇ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಮತ್ತು ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಜೊತೆಗೆ ಅದೇ ದಿನ ರಾತ್ರಿ 10 ಗಂಟೆಗೆ ಅವಿನಹಳ್ಳಿಯಲ್ಲಿ ಬಳೆ ಕೋಲಾಟ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಹಾಲಪ್ಪನವರ ಅಭಿಮಾನಿಗಳು ಹಾಗೆಯೇ ಬಿಜೆಪಿ ಕಾರ್ಯಕರ್ತರು ಈ ರೀತಿಯಾದ ವಿಶೇಷ ಕಾರ್ಯಕ್ರಮಗಳ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಿದ್ದು ಕಾರ್ಯಕರ್ತರು ಹಾಲಪ್ಪನವರ ಅಭಿಮಾನಿಗಳು ಈ ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯುವರಾಜ್ ಗೌಡ್ರು, ಮೋಹನ್ ಮಂಡನಿ,ಮನೋದರ, ಹರೀಶ್, ಗಣೇಶ್, ಕಿರಣ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
H.HALAPPA BIRTHDAY..
Discover more from Prasarana news
Subscribe to get the latest posts sent to your email.