FOUNDATION STONE: ಅಮ್ಮನಘಟ್ಟ  ದೇವಸ್ಥಾನದ 108 ಮೆಟ್ಟಿಲುಗಳ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ ಸಂಸದರು….


ಹೊಸನಗರ:ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ಸುಸಜ್ಜಿತ ಶಾಶ್ವತ 108 ಮೆಟ್ಟಿಲು ನಿರ್ಮಾಣಕ್ಕೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ದೇಣ ಗೆ ನೀಡುವ ಮೂಲಕ ಶಿಲನ್ಯಾಸ ನೆರವೇರಿಸಿದರು.
ದೇವಸ್ಥಾನದ ಮೆಟ್ಟಿಲು ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರರವರು ದೇವಿಯ ದರ್ಶನಕ್ಕೆ ಭಕ್ತರು ಮೆಟ್ಟಿಲ ಮೇಲೆ ನಡೆದು ಬರುವಾಗ ಸಂಸದರ ಹೆಸರು ನೆನಪು ಮಾಡಿಕೊಳ್ಳುತ್ತಾ ನಮಗೆ ಸದಾ ಆಶೀರ್ವಾದ ಮಾಡಲಿ ಎಂಬ ಉದ್ದೇಶದಿಂದ ನಮ್ಮ ಮಾತೃ ಶ್ರೀ ಯವರ ಹೆಸರಿನಲ್ಲಿ  ೧೦ ಲಕ್ಷ ರೂ ಹಣವನ್ನು ದೇಣ ಗೆ ನೀಡುತ್ತಿರುವುದಾಗಿ ಭಕ್ತರ ಸಮ್ಮುಖದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ಬಿ.ಸ್ವಾಮಿರಾವ್‌ರಿಗೆ  ಸಮರ್ಪಿಸಿದರು.
ಹಿರಿಯರಾದ ಬಿ.ಸ್ವಾಮಿರಾವ್ ಇವರು ಕಳೆದ ಮೂರು ವರ್ಷದ ಹಿಂದೆ  ಅಮ್ಮನಘಟ್ಟ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಆಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ದೇವಿಯ ಸನ್ನಿಧಿಯಲ್ಲಿ   ಸಂಕಲ್ಪಿಸಿದAತೆ ಇಂದು ಶಿಲಾಮಯ ದೇವಸ್ಥಾನ ಸುಸಜ್ಜಿತ ಕಟ್ಟಡ ನಿರ್ಮಾಣದೊಂದಿಗೆ ಲೋಕಾರ್ಪಣೆಯಾಗುತ್ತಿದ್ದು ಮುಂದೊAದು ದಿನ ಈ ಕ್ಷೇತ್ರ ಪ್ರವಾಸಿ ಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ ಎಂದ ಅವರು ಸರ್ಕಾರದಿಂದ ಈ ಹಿಂದೆ ೩ ಕೋಟಿ ರೂ ಅನುದಾನ ಬಿಡುಗಡೆಯಾಗುವ ಮೂಲಕ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿತು ಅದರೆ ಸರ್ಕಾರ ಬದಲಾದ ಕಾರಣ ಬಿಡುಗಡೆಯಾದ ಅನುದಾನವನ್ನು ನೀಡುವಲ್ಲಿ ವಿಳಂಬ ದೋರಣೆ ತಾಳಿದೆ ಎಂದು ಹೇಳಿ ಮುಂದಿನ ದಿನಗಳಲ್ಲಿ ಆ ಅನುದಾನ ದೇವಸ್ಥಾನ ಅಭಿವೃದ್ದಿ ಕಾರ್ಯಕ್ಕೆ ಸಮರ್ಪಕವಾಗಿ  ಸದ್ಬಳಕೆಯಾಗಲೆಂದರು.
ಶಿಲನ್ಯಾಸ ಸಮಾರಂಭದ ಆಧ್ಯಕ್ಷತೆಯನ್ನು ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷ ಬಿ.ಸ್ವಾಮಿರಾವ್ ವಹಿಸಿದ್ದರು.
ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜೈಪ್ರಕಾಶಶೆಟ್ಟರು, ದೇವಸ್ಥಾನ ಸೇವಾ ಸಮಿತಿಯ ಪುಟ್ಟಪ್ಪ, ದೇವರಾಜ,ಹರಿಶಕಲ್ಯಾಣಪ್ಪಗೌಡರು,ಶ್ರೀನಿವಾಸಹಿಂಡ್ಲಮನೆ,ರತ್ನಮ್ಮ, ಸುದೀರ್‌ಭಟ್,ಕೋಡೂರು ವಿಜೇಂದ್ರರಾವ್, ಹಾಗೂ ಹೊಸನಗರ ತಾಲ್ಲೂಕ್ ಬಿ.ಜೆ.ಪಿ ಆಧ್ಯಕ್ಷ ಮತ್ತಿಮನೆ ಕೆ.ವಿ.ಸುಬ್ರಹ್ನಣ್ಯ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸುರೇಶಸ್ವಾಮಿರಾವ್, ಬಿ.ಎಸ್.ಪುರುಷೋತ್ತಮ್‌ರಾವ್ ಬಿದರಹಳ್ಳಿ, ತಾಲ್ಲೂಕ್ ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ ಅಲುವಳ್ಳಿ, ಮುಖಂಡರಾದ ಎ.ವಿ.ಮಲ್ಲಿಕಾರ್ಜುನ,ಬಿ.ಯುವರಾಜ್,ಹಾಲಗದ್ದೆ ಉಮೇಶ್,ರಾಮಚಂದ್ರ ಹರತಾಳು, ಲೇಖನ ಚಂದ್ರನಾಯ್ಕ್, ತೀರ್ಥೇಶ್ ಕಲ್ಯಾಣಪ್ಪಗೌಡರು, ಮಂಡಾನಿ ಮೋಹನ್,ಇನ್ನಿತರರು ಹಾಜರಿದ್ದರು..

FOUNDATION STONE...


Discover more from Prasarana news

Subscribe to get the latest posts sent to your email.

  • Related Posts

    SHAKTI SCHEME:ಶಕ್ತಿ ಯೋಜನೆ: 500 ಕೋಟಿ ಮಹಿಳೆಯರ ಪ್ರಯಾಣ; ಸಿಹಿ ಹಂಚಿ ಸಂಭ್ರಮಿಸಿದ ಹೊಸನಗರ ಬ್ಲಾಕ್ ಕಾಂಗ್ರೆಸ್…

    ಹೊಸನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ ಸಂಭ್ರಮದ ಅಂಗವಾಗಿ ಇಂದು ಹೊಸನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹೆಚ್ ಬಿ ಚಿದಂಬರ್ ನೇತೃತ್ವದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ…

    Read more

    RIPPONPET NEWS:ಕಳಸವಳ್ಳಿ ಸಿಗಂದೂರು ಸೇತುವೆಗೆ ಬಿ.ಎಸ್.ಯಡಿಯೂರಪ್ಪ ಹೆಸರಿಡುವಂತೆ ಒತ್ತಾಯ…

    ರಿಪ್ಪನ್‌ಪೇಟೆ: ಇದೇ 14 ರಂದು ಲೋಕಾರ್ಪಣೆಗೊಳ್ಳುತ್ತಿರುವ ಅಂಬಾರಗೊಡ್ಲು-ಕಳಸವಳ್ಳಿ ಸಿಗಂದೂರು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿಡುವಂತೆ ಹೊಸನಗರ ತಾಲ್ಲೂಕು ಆಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸರ್ಕಾರವನ್ನು ಆಗ್ರಹಿಸಿ ನಾಡಕಛೇರಿಯ ಉಪತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಹೊಸನಗರ ಆಖಿಲ ಭಾರತ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading