ENVIRONMENT SONG:      ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ಪರಿಸರ ಗೀತ ನಮನ’ ಕಾರ್ಯಕ್ರಮ..

ಹೊಸನಗರ:ಮಾನವನಿಗೆ ಪರಿಸರವು ಅತ್ಯಮೂಲ್ಯ ಕೊಡುಗೆಯಾಗಿದೆ. ಇಂದು ಪರಿಸರವು ಮಾನವರಿಗೆ ನೀಡಿದ ಎಲ್ಲವನ್ನೂ ಗೌರವಿಸಲು ಮತ್ತು ಕೃತಜ್ಞರಾಗಿರಲು ಮತ್ತು ಅದನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಬೇಕು. ಪ್ರಕೃತಿಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ನಮಗೆ ನೆನಪಿಸಿಕೊಳ್ಳಬೇಕು. ಭೂಮಿಯ ಮೇಲಿನ ವಾತಾವರಣವನ್ನು ಕಲುಷಿತಗೊಳಿಸದಂತೆ ಉಳಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಮತ್ತು ಪ್ರಪಂಚದಾದ್ಯಂತದ ಜನರನ್ನು ಈ ದಿಶೆಯಲ್ಲಿ ಪ್ರೇರೇಪಿಸಬೇಕು ಎಂದು ಪ್ರಸಕ್ತಸಾಲಿನ ಜೀವವೈವಿಧ್ಯ ಪ್ರಶಸ್ತಿ ಪುರಸ್ಕೃತ, ಜಲತಜ್ಞ ಚಕ್ರವಕ ಸುಬ್ರಹ್ಮಣ್ಯ ಹೇಳಿದರು.
ಕಾರಣಗಿರಿ ಸಿದ್ಧಿವಿನಾಯಕ ಸಭಾ ಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ, ಕಾರಣಗಿರಿ ಇವರ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ 'ಪರಿಸರ ಗೀತ ನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರಾಸಕ್ತ ವಿನಾಯಕ ಪ್ರಭು ಮಾತನಾಡಿ ಹಿಂದೆಲ್ಲ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಬಂದಾಗ ನಕ್ಕ ನಾವು ಈಗ ಪ್ರತಿ ಹಳ್ಳಿಹಳ್ಳಿಯಲ್ಲೂ ಪ್ಲಾಸ್ಟಿಕ್ ಬಾಟಲಿಗಳು ಆವರಿಸಿಕೊಂಡಿದೆ. ಮುಂದೆ ಆಮ್ಲಜನಕವು ಸಿಲಿಂಡರ್ ರೂಪದಲ್ಲಿ ಬಂದರೆ ಅಚ್ಚರಿ ಏನಿಲ್ಲ.    ಪರಿಸರ ದಿನ ಎಂದರೆ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿದಿನವೂ ಪರಿಸರ ದಿನವೆಂದು ಆಚರಿಸೋಣ ಎಂದು ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಕಲಾಭಾರತಿ ತಂಡದಿಂದ ಪರಿಸರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಗಾಯಕಿ ಗಾಯತ್ರಿ ಅರುಣ್, ಗಾಯಕ ಹೊಸನಗರದ ಸುರೇಶ, ಹನಿಯ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು..

ENVIRONMENT SONG...


Discover more from Prasarana news

Subscribe to get the latest posts sent to your email.

  • Related Posts

    BYR:HOSANAGARA: ಸಂಸದರಿಂದ: ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ…

    ಹೊಸನಗರ:ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಇಂದು  ಸರ್ಕಾರಿ ಶಾಲೆಯಲ್ಲಿ ಶಿಕ್ಷಣಾಭ್ಯಾಸ ಮಾಡುತ್ತಿರುವ ಪ್ರಾಥಮಿಕ ಶಾಲೆಯ 1 ರಿಂದ 4 ನೆ ತರಗತಿ ಮಕ್ಕಳಿಗೆ ಸ್ವಟರ್ ಅನ್ನು ಸಂಸದರಾದ ಬಿ ವೈ ರಾಘವೇಂದ್ರ ವಿತರಿಸಿದರು.ವಿತರಣೆ ಬಳಿಕ ಮಾತನಾಡಿದ ಅವರು…

    Read more

    RIPPONPET NEWS:ಜುಲೈ 19 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ….

    ರಿಪ್ಪನ್‌ಪೇಟೆ ;-ಜುಲೈ 19 ರ ಶನಿವಾರ ಸಂಜೆ   ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಆಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ 2025-26 ನೇ ಸಾಲಿನ ನೂತನರೋಟರಿಕ್ಲಬ್ ಪದವಿ ಸ್ವೀಕಾರ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading