

ಹೊಸನಗರ: ತಾಲೂಕಿನ ಹುಂಚ ಹೋಬಳಿಯ ವಸುವೆ ಗ್ರಾಮದಲ್ಲಿ 4.02 ಅಕ್ರಮ ಭೂ ಒತ್ತುವರಿಯನ್ನು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ತೆರವುಗೊಳಿಸಲಾಯಿತು.
ವಸುವೆ ಗ್ರಾಮದ ಸರ್ವೇ ನಂಬರ್ 17ರಲ್ಲಿ ಒಟ್ಟು 4.02 ಎಕರೆ ಕಂದಾಯ ಭೂಮಿಯನ್ನು ಕಾನೂನು ಬಹಿರವಾಗಿ ಶ್ರೀಧರ್ ಬಿನ್ ರಾಜಪ್ಪ ಗೌಡ ಎಂಬುವವರು ಒತ್ತುವರಿ ಮಾಡಿದ್ದು ಇದನ್ನು ತೇರವು ಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ವಾಸುವೆ ಗ್ರಾಮದ ಗ್ರಾಮಸ್ಥರು ಇಲಾಖೆಗೆ ದೂರನ್ನು ನೀಡಿದ್ದು ದೂರಿನ ಅನ್ವಯ ಇಂದು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಕಾನೂನುಬಾಹಿರವಾಗಿ ಅತಿಕ್ರಮಣವಾಗಿದ್ದ ಭೂಮಿಯನ್ನು ತೆರವು ಗೊಳಿಸಿದರು
ಈ ಕಾಯಚರಣೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾದ ಸೈಯದ್ ಅಫ್ರೋಸ್ ಅಹಮದ್, ನವೀನ್ ಕುಮಾರ್, ಸಿದ್ದಪ್ಪ, ಲೋಹಿತ್, ಅನುಷಾ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಸದಸ್ಯರಾದ ಧರ್ಮಪ್ಪ, ಚಂದ್ರಕಲಾ ಶ್ರೀನಿವಾಸ್, ಲಕ್ಷ್ಮೀದೇವಮ್ಮ, ಭಾಗಿಯಾಗಿದ್ದರು..
ENCROACHMENT..
Discover more from Prasarana news
Subscribe to get the latest posts sent to your email.