

ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು.
ಇಂದು ಬೆಳಗ್ಗೆ ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು.
ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, ಮುಸಲ್ಮಾನರು ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ಒಂದು ದೊಡ್ಡ ಹಬ್ಬವಾಗಿದೆ ಮುಸಲ್ಮಾನರು ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ ಅ.ಸ ರವರ ತ್ಯಾಗದ ಸಂಕೇತವಾಗಿಯು ಸೃಷ್ಟಿಕರ್ತನ ಭಕ್ತಿಯ ಅನುಸಾರವಾಗಿ ಅತ್ಯಂತ ಸಂಭ್ರಮದಿಂದ ಸಡಗರದಿಂದ ಆಚರಿಸುತ್ತಾರೆ . ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು.
ನಂತರ ಮಸೀದಿ ಗುರುಗಳು ಹಾಗೂ ಮುಸ್ಲಿಮ್ ಬಾಂಧವರು, ಪುಟಾಣಿಗಳು, ಮಕ್ಕಳು,ಯುವಕರು, ವಯೋವೃದ್ಧರು ಯಾದಿಯಾಗಿ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ,ಪರಸ್ಪರ ಶುಭಾಶಯಗಳು ಕೋರಿದರು.
ಈ ಸಂಧರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಸನಬ್ಬ ಬ್ಯಾರಿ ,ಕಾರ್ಯದರ್ಶಿ ಶೇಖಬ್ಬ ಮುಖಂಡರಾದ ಅರ್ ಎ ಚಾಬುಸಾಬ್, ಅಮೀರ್ ಹಂಜಾ,ಆಸೀಫ಼್ ಭಾಷಾಸಾಬ್, ಮುಸ್ತಾಫ,ಫ಼ಾಜಿಲ್,ವಾಹಿದ್ ,ರೆಹಮಾನ್, ನದೀಮ್ , ರಹೀಮ್ ಚಾಲಿ , ಫೈಜಲ್ ,ಸಲೀಂ , ಅಫ಼್ಜಲ್ ಬ್ಯಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಗಾಳಿಬೈಲ್ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಪ್ರಾರ್ಥನೆ:
ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದ ಈದ್ಗಾ ಮೈದಾನದಲ್ಲಿ ಬಕ್ರೀದ್ ಸಂಭ್ರಮದಿಂದ ಆಚರಿಸಿದರು.ಗಾಳಿಬೈಲ್ ಜುಮ್ಮಾ ಮಸೀದಿ ಧರ್ಮಗುರುಗಳ ನೇತೃತ್ವದಲ್ಲಿ ಗಾಳಿಬೈಲ್ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಷರೀಫ್ ಸಾಬ್, ಜಾವಿದ್ ಸಾಬ್ , ಘನಿಸಾಬ್,ವಜೀರ್ ಸಾಬ್,ಉಬೇದುಲ್ಲಾ ಷರೀಫ್, ಸೈಫ಼ುಲ್ಲಾ ,ಹಿದಾಯತ್,ಶಬ್ಬೀರ್ ಸಾಬ್ ,ಖಲೀಲ್ ಷರೀಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬಕ್ರೀದ್ ಹಿನ್ನಲೆಯಲ್ಲಿ ಹೊಸನಗರ, ಬಟ್ಟೆಮಲ್ಲಪ್ಪ, ಕೆಂಚನಾಲ, ಗರ್ತಿಕೆರೆ, ಸುಣ್ಣದ ಬಸ್ತಿ, ಬಿಲ್ಲೇಶ್ವರ, ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
EID MUBARAK...
Discover more from Prasarana news
Subscribe to get the latest posts sent to your email.