

ಹೊಸನಗರ: ಮೆಸ್ಕಾಂ ಇಲಾಖೆ ಹೊಸನಗರದ ಕಚೇರಿ ಮುಂಭಾಗ ನಿಲ್ಲಿಸಿದ್ದ ಮೆಸ್ಕಾಂ ಲಾರಿಯಿಂದ 135 ಲೀಟರ್ ಡೀಸೆಲ್ ಕಳವು ಮಾಡಿದ ಘಟನೆ ನಡೆದಿದೆ.
ಮೆಸ್ಕಾಂ ಹೊಸನಗರ ಉಪವಿಭಾಗದ ದಿನದ ಕೆಲಸ ಮುಗಿಸಿ ಕಚೇರಿ ಎದುರು ಲಾರಿ ನಿಲ್ಲಿಸಿದ್ದ ವೇಳೆ ಬರೋಬ್ಬರಿ 135 ಲೀ ಡೀಸೆಲ್ ಕಳ್ಳತನ ನಡೆದಿರೋ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರವಷ್ಟೇ ಟ್ಯಾಂಕ್ ತುಂಬಿಸಿ 30 ರಿಂದ 35 ಕಿಮೀ ಸಂಚರಿಸಿ ಬಳಿಕ ರಾತ್ರಿ ಕಚೇರಿ ಎದುರು ಭಾಗದಲ್ಲಿ ಲಾರಿ ನಿಲ್ಲಿಸಲಾಗಿತ್ತು. ಬೆಳಿಗ್ಗೆ ಎಂದಿನಂತೆ ಲಾರಿ ಚಾಲನೆಗೆ ಮುಂದಾದಾಗ ಡೀಸೆಲ್ ಖಾಲಿ ಆಗಿರುವುದು ಬೆಳಕಿಗೆ ಬಂದಿದೆ
ಕೆಎ 15 ಎ 9254 ವಾಹನದ 135 ಲೀ ಡೀಸೆಲ್ ಕಳ್ಳತನವಾಗಿರುವ ಬಗ್ಗೆ ಹೊಸನಗರ ಮೆಸ್ಕಾಂ ಸಹಾಯಕ ಎಂಜನಿಯರ್ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ...
DIESEL THIEVES...
Discover more from Prasarana news
Subscribe to get the latest posts sent to your email.