

ಹೊಸನಗರ: ತಾಲ್ಲೂಕಿನ ನಾಗರಕೊಡಿಗೆ ನಿವಾಸಿ ಶ್ರೀಧರ ಜೋಯಿಸ್ ( 70) ಭಾನುವಾರ ಬೆಳಿಗ್ಗೆ ನಿಧನಹೊಂದಿದರು.
ಇವರಿಗೆ ಪತ್ನಿ, ಒರ್ವ ಪುತ್ರ,ಪುತ್ರಿ ಇದ್ದಾರೆ.
ಮೃತರ ಅಂತ್ಯಕ್ರಿಯೆ ಸ್ಥಳೀಯ ಹಿಂದು ರುದ್ರಭೂಮಿಯಲ್ಲಿ ನಡೆಯಿತು.
ಶ್ರೀಧರ ಜೋಯಿಸ್ ರು ಪುರೋಹಿತ ವೃತ್ತಿಯಲ್ಲಿ ಹೆಸರು ಮಾಡಿದ್ದರು. ನಾಟಿ ಔಷಧಿ ಪಂಡಿತರಾಗಿದ್ದರು ಅಲ್ಲದೆ ಸಂಗೀತ ಆರಾಧಕರಾಗಿದ್ದು ಉತ್ತಮ ತಬಲವಾದಕರಾಗಿದ್ದರು. ತಬಲಾ ಜೋಯಿಸ್ ಎಂದೇ ಜನಾನುರಾಗಿ ಆಗಿದ್ದರು.
DEATH NEWS...