

ಶಿವಮೊಗ್ಗ:ಅಕ್ರಮವಾಗಿ ಮರಳು ಸಂಗ್ರಹ ಮತ್ತು ಸಾಗಾಟದ ವಿರುದ್ಧ ಜೂ.16 ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುವುದಾಗಿ ಜನಸಂಗ್ರಾಮ ಪರಿಷತ್ತಿನ ಸದಸ್ಯ ಗಿರೀಶ್ ಆಚಾರ್ ತಿಳಿಸಿದ್ದಾರೆ.
ಹೊಸನಗರ ತಾಲೂಕಿನಲ್ಲಿ ಶರಾವತಿ ನದಿಯಿಂದ ನಿತ್ಯಾ ಅಕ್ರಮವಾಗಿ ನೂರಾರು ಲೋಡ್ ಮರಳು ಸಂಗ್ರಹ ಮತ್ತು ಸಾಗಾಟ ನಡೆಯುತ್ತಿರುವ ಬಗ್ಗೆ ಸಾಕಷ್ಟು ಬಾರಿ ಇಲ್ಲಿನ ತಾಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಪಶ್ಚಿಮ ಘಟ್ಟ ಹಾಳಾಗುವುದಲ್ಲದೆ ನದಿ ಮೂಲ ಹಾಳಾಗುತ್ತಿದೆ ಹಾಗು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ಗಳು ನಷ್ಟವಾಗುತ್ತಿದೆ. ಇದರ ವಿರುದ್ಧ ಜೂ. 16 ರಂದು ಬೆಳಗ್ಗೆ 10:30 ರಿಂದ ಡಿಸಿ ಕಚೇರಿ ಮುಂದೆ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುವುದಾಗಿ ಗಿರೀಶ್ ಆಚಾರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ...
Discover more from Prasarana news
Subscribe to get the latest posts sent to your email.