

ಹೊಸನಗರ: ಕಳೆದೆರಡು ದಿನಗಳ ಹಿಂದೆ ಐಬಿ ರಸ್ತೆಯಲ್ಲಿರುವ ಸಮರ್ಥ ಸೌಧದ ಹಿಂಭಾಗ ಇರುವ 10 ಅಡಿ ಅಳವಿರುವ ನೀರಿನ ಟ್ಯಾಂಕ್ ನಲ್ಲಿ ಬಿದ್ದಿದ್ದ ಗೋವನ್ನ ಸ್ಥಳೀಯ ಯುವಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಗಳು ರಕ್ಷಿಸಿದ್ದಾರೆ.
ನಿನ್ನೆ ರಾತ್ರಿ ಸ್ಥಳೀಯ ಯುವಕರಿಗೆ ಸಮರ್ಥಸೌಧದ ಹಿಂಭಾಗ ಗೋವು ಕೂಗುತ್ತಿರುವ ಶಬ್ದ ಕೇಳುತ್ತಿದೆ ಎಂದು ಅಲ್ಲಿನ ಅಡಿಕೆ ದಾಸ್ತಾನು ಕೊಠಡಿಯ ಕಾವಲುಗಾರ ಒಬ್ಬರು ತಿಳಿಸಿದ್ದು ಕೂಡಲೇ ಯುವಕರು ಅಲ್ಲಿಗೆ ತೆರಳಿ ಗೋವನ್ನ ಹುಡುಕಲು ಪ್ರಾರಂಭಿಸಿದ್ದಾರೆ ಅಲ್ಲೇ ಸಮೀಪ ಇದ್ದ ನೀರಿನ ಟ್ಯಾಂಕ್ ನಲ್ಲಿ ಗೋವು ಬಿದ್ದಿರುವ ಬಗ್ಗೆ ತಿಳಿದು ಕೂಡಲೇ ಅಗ್ನಿಶಾಮಕ ದಳ ಠಾಣೆಗೆ ಮಾಹಿತಿಯನ್ನು ನೀಡಿ ಅವರು ಬಂದು ಬಳಿಕ ಅವರೊಡನೆ ಸೇರಿ ಸತತ ಎರಡು ಗಂಟೆಗಳ ಕಾಲ ಕಾರ್ಯಚರಣೆಯನ್ನು ನಡೆಸಿ ಗೋವನ್ನ ರಕ್ಷಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿಗಳಾದ ರವಿ ಜಿ, ಸುರೇಶ್ ಗೌಡ, ಆಂಜನೇಯ, ರವೀಂದ್ರ,ಕೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಸುರೇಂದ್ರ ಕೋಟ್ಯಾನ್, ರಾಘವೇಂದ್ರ, ಸಂತೋಷ್, ಅಣ್ಣಪ್ಪ, ಗುರುಪ್ರಸಾದ್, ಶರತ್, ಕಿರಣ್ ಪಾಲ್ಗೊಂಡಿದ್ದರು.
COW PROTECTION...
Discover more from Prasarana news
Subscribe to get the latest posts sent to your email.