

ಹೊಸನಗರ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ದಾಟಿ ಪಕ್ಕದ ಮನೆಯ ಅಂಗಳಕ್ಕೆ ಪಲ್ಟಿ ಹೊಡೆದು ಬಿದ್ದ ಘಟನೆ ರಾಣೆಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಯನಗರ ಸಮೀಪ ನಡೆದಿದೆ.
ಗುರುವಾರ ಸಂಜೆ ಗೋವಾದಿಂದ ಬಂದು ಕಾರು ಜಯನಗರ ಶರಾವತಿ ನದಿ ಅಪ್ ನಲ್ಲಿ ನಿಯಂತ್ರಣ ತಪ್ಪಿದೆ. ರಸ್ತೆ ದಾಟಿ ಮರಕ್ಕೆ ತಾಗಿದೆ. ನಂತರ ಪಕ್ಕದಲ್ಲಿದ್ದ ಮನೆ ಅಂಗಳಕ್ಕೆ ಪಲ್ಟಿ ಹೊಡೆದು ಬಿದ್ದಿದೆ.
ಕಾರಿನಲ್ಲಿ ಮೂರು ಮಂದಿ ಪ್ರಯಣಿಸುತ್ತಿದ್ದು ಸಣ್ಣ ಪುಟ್ಟ ಗಾಯವಾಗಿದೆ. ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
CAR ACCIDENT..
Discover more from Prasarana news
Subscribe to get the latest posts sent to your email.