

ಹೊಸನಗರ: ಇಂದು ಮೆಸ್ಕಾಂ ಇಲಾಖೆ ಹೊಸನಗರದಲ್ಲಿ ನಿಗದಿಯಾಗಿದ್ದ ಹೊಸನಗರ ಉಪ ವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯನ್ನು ನಿಗದಿಪಡಿಸಿದ ಅಧಿಕಾರಿಗಳು ಬಾರದ ಹಿನ್ನೆಲೆ ಸಾರ್ವಜನಿಕರು ಸಭೆಯನ್ನು ಬಹಿಷ್ಕರಿಸಿದ ಘಟನೆ ನಡೆದಿದೆ.
ಇಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಮೆಸ್ಕಾಂ ಜನಸಂಪರ್ಕ ಸಭೆಯನ್ನು ಅಧೀಕ್ಷಕ ಇಂಜಿನಿಯರ್ ಜಯದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸುವುದಾಗಿ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗಿತ್ತು ಆದರೆ ಬೇರೆಡೆ ಸಭೆಯ ಕಾರಣ ನೀಡಿ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲು ಇಲಾಖೆ ಮುಂದಾಗಿದ್ದು ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಇದಕ್ಕೂ ಮೊದಲು ಅಧಿಕಾರಿಗಳೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚ ಅಧ್ಯಕ್ಷರಾದ ಎಂಎನ್ ಸುಧಾಕರ್ ಪ್ರತಿ ಬಾರಿ ಹೊಸನಗರ ಮೆಸ್ಕಾ ಇಲಾಖೆಯಲ್ಲಿ ಜನಸಂಪರ್ಕ ಸಭೆಯನ್ನು ಕೇವಲ ಶಿಷ್ಟಾಚಾರಕ್ಕೆ ಕರೆಯಲಾಗುತ್ತಿದೆ ಸಾರ್ವಜನಿಕರಿಂದ ಆಹ್ವಾಲು ಗಳನ್ನ ಸ್ವೀಕರಿಸುವ ನೀವು ಅದನ್ನ ಭದ್ರವಾಗಿ ಕಚೇರಿಯಲ್ಲಿ ಇಟ್ಟುಕೊಳ್ಳುತ್ತೀರಿ ವಿನಹ ಈವರೆಗೂ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ನೀವು ಮುಂದಾಗಿಲ್ಲ ನಿತ್ಯ ಹೊಸನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ ಇದಕ್ಕೆ ಸಾಗರ ಹೊಸನಗರ ಮುಖ್ಯ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂಬ ಕಾರಣ ನೀಡಿ ಜನರನ್ನ ಸುಮ್ಮನಾಗಿಸುತಿದ್ದೀರಿ ಪ್ರತಿ ಬಾರಿಯೂ ಜಂಗಲ್ ಕಟಿಂಗ್ ಕಾರಣ ನೀಡಿ ಒಂದು ದಿನ ವಿದ್ಯುತ್ತನ್ನು ಕಡಿತಗೊಳಿಸುವ ಇಲಾಖೆ ಎಲ್ಲಿ ಜಂಗಲ್ ಕಟಿಂಗ್ ಕೆಲಸವನ್ನ ಮಾಡುತ್ತಿದೆ ಇಲ್ಲಿನ ಅಧಿಕಾರಿಗಳಿಗೆ ಹೊಸನಗರ ವೆಂದರೆ ನಿರ್ಲಕ್ಷ ಬೆಳಕನ್ನು ನೀಡುವ ಸಲುವಾಗಿ ತಮ್ಮ ಬದುಕನ ಕತ್ತಲೆಗೆ ತಳ್ಳಿದಂತ ನಮ್ಮ ಹಿರಿಯರ ತ್ಯಾಗ ಮನೋಭಾವ ಇಂದು ರಾಜ್ಯಕ್ಕೆ ಬೆಳಕನ್ನ ನೀಡುತ್ತಿದೆ ಆದರೆ ತ್ಯಾಗ ಮಾಡಿದ ನಮ್ಮ ತಾಲೂಕು ಇಂದು ಸಹ ಕತ್ತಲಲ್ಲಿದೆ ಆದ್ದರಿಂದ ನಿಗದಿಪಡಿಸಿದ ಅಧಿಕಾರಿಗಳೇ ಬಂದಮೇಲೆ ಈ ಸಭೆಯನ್ನ ನಡೆಸಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ವಿದ್ಯುತ್ ನಿರ್ವಹಣೆ ಜಂಗಲ್ ಕಟಿಂಗ್ ಇನ್ನಿತರೆ ಕಾರಣಗಳನ್ನು ನೀಡಿ ನಮಗೆ ವಿದ್ಯುತ್ತನ್ನು ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಹಾಗೇನಾದರೂ ತುತ್ತು ಕಾರ್ಯ ಸಂದರ್ಭದಲ್ಲಿ ನಮಗೆ ಪರ್ಯಾಯ ವಿದ್ಯುತ್ ವ್ಯವಸ್ಥೆಯನ್ನು ಮಾಡಿಯೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು ಆಗ್ರಹಿಸಿ ಹಾಗೆಯೇ ಇಂತಹ ಸಭೆಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಸ್ಥಳೀಯರಾದ ವಿಜಯ್, ರಂಗನಾಥ್, ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಹಿರೇಮನತಿ, ಮುರುಳಿಧರ್ ಎಲ್ ಕೆ. ಮುಂತಾದವು ಪಾಲ್ಗೊಂಡಿದ್ದರು...
BOYCOTT....
Discover more from Prasarana news
Subscribe to get the latest posts sent to your email.