

ಹೊಸನಗರ: ಅಪಘಾತ,ತುರ್ತು ಪರಿಸ್ಥಿತಿ ಹಾಗೂ ಇತರೆ ಜೀವ ಉಳಿಸುವ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು ಶ್ರೇಷ್ಠ ಕೆಲಸ
ಮನುಷ್ಯರ ರಕ್ತ ಮನುಷ್ಯರಿಗೆ ಮಾತ್ರ ಉಪಯೋಗ ಬರುವುದರಿಂದ ರಕ್ತದಾನ ಮಾಡುವುದು ಉಪಯುಕ್ತ ಎಂದು ಹಿರಿಯ ನ್ಯಾಯಾಧೀಶ ಫಾರೂಕ್ ಜಾರೆ ತಿಳಿಸಿದರು..
ಭಾರತೀಯ ಸ್ಟೇಟ್ ಬ್ಯಾಂಕ್
ಇದರ 70ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ರಕ್ತನಿಧಿ ಕೇಂದ್ರ, ಮೆಗ್ಗಾನ್ ಬೋಧನಾ ಆಸ್ಪತ್ರೆ, ಶಿವಮೊಗ್ಗ ಜೇಸಿಐ ಹೊಸನಗರ ಕೊಡಚಾದ್ರಿ, ಜೇಸಿಐ ಹೊಸನಗರ ಡೈಮಂಡ್, ಲಯನ್ಸ್ ಕ್ಲಬ್, ಹೊಸನಗರ, ಸಾರ್ವಜನಿಕ ಆಸ್ಪತ್ರೆ, ಹೊಸನಗರ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಹೊಸನಗರ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ.), ಹೊಸನಗರ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಹೊಸನಗರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಪಂದನ ಪ್ರಿಂಟರ್ಸ್ ಮಾಲೀಕರಾದ
ಸುರೇಶ್ ಬಿ ಎಸ್ ಅವರು 66ನೇ ಬಾರಿಗೆ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ನ್ಯಾಯಾಧೀಶರಾದ ಮಾರುತಿ ಶಿಂಧೆ. ವೈದ್ಯರಾದ ಡಾ.ಲಿಂಗರಾಜ್, ಡಾ.ಅಂಕಿತ ವಕೀಲ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಪ್ಪ, ಜೆಸಿ ಕಾರ್ತಿಕ್, ಜೆಸಿ ವಿನಾಯಕ ಕರಬ,
ಲಯನ್ ದೀಪಕ್ ಸ್ವರೂಪ್,
ಸ್ಪೋರ್ಟ್ಸ್ ಕ್ಲಬ್ ಸದಸ್ಯ ಶ್ರೀ ಎಂ ಪಿ ಸುರೇಶ್ ಹೊಸನಗರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಶ್ರೀ ಜಯಂತ್ ಘೋಷ್. ಬ್ಯಾಂಕ್ ಸಿಬ್ಬಂದಿ ಗಣೇಶ್ ಮಧುಕರ್ ಮತ್ತು ಮಧುಕರ್ ಹೆಚ್ ಬಿ ಉಪಸ್ಥಿತರಿದ್ದರು.
BLOOD DONATION CAMP..
Discover more from Prasarana news
Subscribe to get the latest posts sent to your email.