

ಹೊಸನಗರ : ಹೊಸನಗರ ವಲಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧಮರ ಮರಗಳನ್ನು ಕಡಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಇಂದು ಅರಣ್ಯ ಸಂಚಾರಿ ದಳದ ಪೊಲೀಸರು ನಿಖರ ಮಾಹಿತಿ ಮೇರೆಗೆ ಹೊಸನಗರ ವಲಯದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರಿಂದ 39.300 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ದಯಾಕುಮಾರ ಅಲಿಯಾಸ್ ದಯಾನಂದ್ ಎಂಬಾತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಕೌಶಿಕ್ ಎಂಬಾತನು ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.ಕಾರ್ಯಾಚರಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿದಳದ ಪಿಎಸ್‌ಐ ವಿನಾಯಕ ಕೆ ಮತ್ತು ಸಿಬ್ಬಂದಿ ಹಾಗೂ ಹೊಸನಗರ ವಲಯದ ವಲಯ ಅರಣ್ಯಾಧಿಕಾರಿಗಳಾದ. ಅನಿಲ್ ಕುಮಾರ್ ಎಸ್. ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಭರತ್ ಕುಮಾರ್ ಗಸ್ತು ಅರಣ್ಯ ಪಾಲಕ ಹಾಗೂ ಸಿಬ್ಬಂದಿಯವರು ಭಾಗಿಯಾಗಿದ್ದರು...
ACCUSED ARRESTED...
Discover more from Prasarana news
Subscribe to get the latest posts sent to your email.